![]() | ||||||||||||
Presenting Neenendare nannolage Song lyrics From the Movie Junglee, Neenendare nannolage Song is sung by Sonu Nigam , Neenendare nannolage Lyrics Written By Jayanth Kaykini, and Music Given by V Harikrishna. Starring Duniya Vijay, Andrita rai, and Others. under the production of Rockline Venkatesh banner
|
Song |
Neenendare nannolage |
Singer |
Sonu Nigam |
Lyrics |
Jayanth Kaykini |
Music |
V Harikrishna |
Movie |
Junglee |
Cast |
Duniya Vijay, Andritha rai |
Neenendare nannolage song lyrics in English
Neenendare nannolage song lyrics in kannada
ನೀನೆಂದರೆ ನನ್ನೊಳಗೆ
ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ
ನೀನೆ ಒಂದು ಸಂಕಲನ
ಓ ಜೀವವೇ ಹೇಳಿಬಿಡು
ನಿನಗೂ ಕೂಡ ಹೀಗೇನಾ
ನೀನೆಂದರೆ ನನ್ನೊಳಗೆ
ಏನೋ ಒಂದು ಸಂಚಲನ
ಏನೋ ಒಂದು ಸಂಚಲನ
(ಸಂಗೀತ)
ತಂದೆನು ಪಿಸು ಮಾತು ಜೇಬಲಿ
ಕಂಡೇನು ಹಸಿ ಮಿಂಚು ಕಣ್ಣಲ್ಲಿ
ಬಂದೇನು ತುಸು ದೂರ ಜೊತೆಯಲಿ
ಮರೆತು ಮೈ ಮನ..
ನಿನ್ನ ಬೆರಳು ಹಿಡಿದು ನಾನು
ನೀರಾ ಮೇಲೆ ಬರೆಯಲೇನು
ನಿನ್ನ ನೆರಳು ಸುಳಿಯುವಲ್ಲು
ಹೂವ ತಂದು ಸುರಿಯಲೇನು
ನಂಬಿ ಕೂತ ಹುಂಬ ನಾನು
ನೀನು ಹೀಗೇನಾ
ನೀನೆಂದರೆ ನನ್ನೊಳಗೆ
ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ
ನೀನೆ ಒಂದು ಸಂಕಲನ
(ಸಂಗೀತ)
ಹೂವಿನ ಮಳೆ ನೀನು ಕನಸಲ್ಲಿ
ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲಿ
ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ
ಬಂದು ಪಾರು ಮಾಡು ನೀನು
ಒಂದೇ ಕನಸು ಕಾಣುವಾಗ
ನಾನು ನೀನು ಬೇರೆಯೇನು
ಶರಣು ಬಂದ ಚೋರ ನಾನು
ನೀನು ಹೀಗೇನಾ..
ನೀನೆಂದರೆ ನನ್ನೊಳಗೆ
ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ
ನೀನೆ ಒಂದು ಸಂಕಲನ
ಓ ಜೀವವೇ ಹೇಳಿಬಿಡು
ನಿನಗೂ ಕೂಡ ಹೀಗೇನಾ
ನೀನೆಂದರೆ ನನ್ನೊಳಗೆ
ಏನೋ ಒಂದು ಸಂಚಲನ
ಹೊ ಹೊ ಹೋ ಏನೋ ಒಂದು ಸಂಚಲನ
( ಹಾಡು ಮುಕ್ತಾಯ )
0 Comments